ಚುನಾವಣಾ ಸುದ್ದಿ

Sat, 05/12/2018 - 23:39
ಮತದಾನ ಕೇಂದ್ರಕ್ಕೆ ಮತದಾರರನ್ನು ಕರೆದುಕೊಂಡು ಬರುತ್ತಿದ್ದ ವಾಹನವನ್ನು ಜೆಡಿಎಸ್ ಕಾರ್ಯಕರ್ತರು ತಡೆದಿದ್ದು, ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದೆ. ನಾಲ್ವರು ಜೆಡಿಎಸ್ ಕಾರ್ಯಕರ್ತರು ಗಾಯಗೊಂಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sat, 05/12/2018 - 23:38
ನಗರಸಭೆ ಮಾಜಿ ಸದಸ್ಯೆ ಶಾಂತಾಬಾಯಿ ದಡ್ಡಿ ಅವರ ಪುತ್ರ ರಾಘವೇಂದ್ರ ಮತ ಚಲಾಯಿಸಲು ಶಾಲೆಯ ಬಳಿ ನಿಂತಿದ್ದು, ಈ ವೇಳೆ ಸ್ಥಳಕ್ಕೆ ಬಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರೊಂದಿಗೆ ವಾಗ್ವಾದ ನಡೆದಿದೆ.
Sat, 05/12/2018 - 23:32
ದಕ್ಷಿಣ ಭಾರತದ ಇತರ ದೇಶೀ ಸಂಸ್ಥಾನಗಳಲ್ಲಿ ಬೆಳೆಯುವ ಹಿಂದುಳಿದ ವರ್ಗಗಳ ಚಳವಳಿ–ಮೈಸೂರಿನಲ್ಲಿ ಬೆಳೆಯಿತು ಹಾಗೂ ಈ ಚಳವಳಿ ದೀರ್ಘಕಾಲ ಉಳಿಯುವಷ್ಟು ಸಶಕ್ತವಾಗಿತ್ತು ಎಂಬುದು ಗಮನಾರ್ಹ ಅಂಶ.
Sat, 05/12/2018 - 23:26
ಚುನಾವಣಾಧಿಕಾರಿಗಳು ಮನವೊಲಿಸಿದ ನಂತರ, ಮಧ್ಯಾಹ್ನ 2 ಗಂಟೆ ನಂತರ ತಾಂಡಾದಲ್ಲಿ ಮತದಾನ ಆರಂಭವಾಯಿತು. ಇಲ್ಲಿ 787 ಮತದಾರರಿದ್ದಾರೆ. ನಂತರ ಹೊಗರ್ತಿಯಲ್ಲಿಯೂ ಮತದಾನ ಮಾಡಿದರು.
Sat, 05/12/2018 - 23:20
ಒಂದು ವೇಳೆ ಬಿಜೆಪಿ ಗೆದ್ದರೆ... ಕಾಂಗ್ರೆಸ್‌: ಇವಿಎಂಗಳನ್ನು ದುರ್ಬಳಕೆ ಮಾಡಲಾಗಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಬಿಜೆಪಿ: ಸಿದ್ದ ಎಲ್ಲಿದ್ದಾರೆ?
Sat, 05/12/2018 - 23:14
ರಾಜ್ಯದ ವಿವಿಧ ಕಡೆಗಳಲ್ಲಿ ಶನಿವಾರ ಹಸೆಮಣೆ ಏರಿದ ಹಲವು ಯುವಕ–ಯುವತಿಯರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು ಮರೆಯಲಿಲ್ಲ. ಮದುವೆಯ ದಿರಿಸಿನಲ್ಲೇ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
Sat, 05/12/2018 - 22:58
ಮಂಗಳೂರು ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಿಲಾಗ್ರಿಸ್‌ ಕಾಲೇಜಿನ ಮತಗಟ್ಟೆಯಲ್ಲಿ ಬೆಳಿಗ್ಗೆ ಗುರುತಿನ ಚೀಟಿಯೊಂದಿಗೆ ಬಂದ ಲೈಂಗಿಕ ಅಲ್ಪಸಂಖ್ಯಾತರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮತದಾನ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಅವರ ಮುಖದಲ್ಲಿ ಸಂತೋಷ ಮತ್ತು ಹುಮ್ಮಸ್ಸು ಎದ್ದು ಕಾಣುತ್ತಿತ್ತು.
Sat, 05/12/2018 - 01:03
ವಿಧಾನಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿದ್ದು,‌ ನಗರದ ಮಸ್ಟರಿಂಗ್ ಕೇಂದ್ರಗಳ ಮೂಲಕ ಸಿಬ್ಬಂದಿ ಮತದಾನ ಪ್ರಕ್ರಿಯೆಗೆ ಶುಕ್ರವಾರ ಅಣಿಯಾದರು.
Sat, 05/12/2018 - 00:57
ಎಪಿಕ್‌ ಕಾರ್ಡ್‌ ಬದಲಿಗೆ ಈ ಕೆಳಗಿನ 12 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಬಳಸಬಹುದು.
Sat, 05/12/2018 - 00:49
ಎರಡು ತಿಂಗಳಿಂದ ಕೈಗೊಂಡ ಅಭಿಯಾನಗಳಿಂದಾಗಿ ರಾಜಧಾನಿಯಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ ಎಂದು ಬಿಬಿಎಂಪಿ ವಿಶ್ವಾಸ ವ್ಯಕ್ತಪಡಿಸಿದೆ.

Pages

Back to Top