ಕುಸಿದು ಬಿದ್ದ ಸೋತ ಅಭ್ಯರ್ಥಿ

ರಾಯಚೂರು: ಲಿಂಗಸುಗೂರು ಮೀಸಲು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಿದ್ಧಪ್ಪ ಬಂಡಿ ಸೋಲಿನ ಸುದ್ದಿ ಕೇಳುತ್ತಿದ್ದಂತೆಯೇ ಎಣಿಕೆ ಕೇಂದ್ರದಲ್ಲಿಯೇ ಕುಸಿದುಬಿದ್ದರು.

ಬೆಂಬಲಿಗರು ಕೂಡಲೇ ಅವರನ್ನು ಸಂತೈಸಿದರು. ತುಂಬಾ ನಿತ್ರಾಣರಾಗಿದ್ದ ಅವರನ್ನು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜೆಡಿಎಸ್‌ನಿಂದ  ಇತರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ರಾಜಾ ವೆಂಕಟಪ್ಪ ನಾಯಕ ಹಾಗೂ ವೆಂಕಟರಾವ್‌ ನಾಡಗೌಡ ಅವರು ಸ್ಥಳಕ್ಕೆ ಧಾವಿಸಿ ಆರೋಗ್ಯ ವಿಚಾರಿಸಿದರು.

2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಸಿದ್ಧಪ್ಪ, ಈ ಬಾರಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಕೈತಪ್ಪಿದ್ದರಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು.

 

Back to Top