ಬಸ್‌ನಲ್ಲಿ ರಾಜಭವನದತ್ತ ಕಾಂಗ್ರೆಸ್‌ ಶಾಸಕರು; ಬಳಿಕ ರೆಸಾರ್ಟ್‌ಗೆ

ಬೆಂಗಳೂರು: ಕುದುರೆ ವ್ಯಾಪಾರ ತಪ್ಪಿಸಲು ಕಾಂಗ್ರೆಸ್‌ ಶಾಸಕರನ್ನು ಬಿಡದಿ ಸಮೀಪದ ಈಗಲ್ಟನ್‌ ರೆಸಾರ್ಟ್‌ಗೆ ಕರೆದೊಯ್ಯಲಾಗುತ್ತಿದೆ.

ಕೆಪಿಸಿಸಿ ಕಚೇರಿಯಿಂದ ಖಾಸಗಿ ಬಸ್‌ ಮೂಲಕ ಶಾಸಕರನ್ನು  ಮೊದಲು ರಾಜಭವನದಕ್ಕೆ ಕರೆದೊಯ್ಯಲಾಗುತ್ತಿದೆ. ಬಳಿಕ ರೆಸಾರ್ಟ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ.

ಸಂಜೆ 5 ಗಂಟೆಗೆ ರಾಜ್ಯಪಾಲರು ಭೇಟಿಗೆ ಕಾಂಗ್ರೆಸ್‌ ಶಾಸಕರಿಗೆ ಸಮಯ ನೀಡಿದ್ದಾರೆ. ಬೆಂಬಲ ಪತ್ರ ನೀಡಲಿರುವ ಶಾಸಕರು ರಾಜ್ಯಪಾಲರ ಎದುರು ಪರೇಡ್‌ ನಡೆಸಲಿದ್ದಾರೆ.

ಡಿ.ಕೆ.ಶಿವಕುಮಾರ್‌ ಶಾಸಕರನ್ನು ರೆಸಾರ್ಟ್‌ಗೆ ತಲುಪಿಸುವ ಜವಾಬ್ದಾರಿ ವಹಿಸಿದ್ದಾರೆ.

 

Back to Top