ಜಗ್ಗೇಶ್ ನಿಮಗೊಂದು ದೊಡ್ಡ ನಮಸ್ಕಾರ: ಪ್ರಕಾಶ್ ರೈ

ಬೆಂಗಳೂರು: ಜಗ್ಗೇಶ್ ಟ್ವೀಟ್ಗಳಲ್ಲಿ ಬಳಸಿರುವ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿರುವ ಪ್ರಕಾಶ್ ರೈ, 'ನೀವು ಪೂಜಿಸುವ ರಾಯರು ತಮ್ಮನ್ನು ನಿರ್ಧರಿಸಲಿ... ನಿಮಗೊಂದು ದೊಡ್ಡ ನಮಸ್ಕಾರ’ ಎಂದಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿ ತೊಡೆತಟ್ಟಿದರೆ ಗಂಡಸುತನ ಎಂದಿದ್ದ ಜಗ್ಗೇಶ್ ಟ್ವೀಟ್ಗೆ ’ರಾಜಕೀಯ ಕಬಡ್ಡಿ ಆಟವಲ್ಲ...ನಿಮ್ಮ ಮನಸು, ಮಾತು ಸರಿಯಲ್ಲ’ ಎಂದು ಪ್ರಕಾಶ್ ರೈ ಉತ್ತರಿಸಿದ್ದರು. ಇದಕ್ಕೆ ಜಗ್ಗೇಶ್ ‘ನನ್ನಪ್ರಕಾರ ಗಂಡಸ್ಸುತನ ಪದಬಳಕೆ ರಾಜಕೀಯದಲ್ಲಿ ಹೋರಾಟ! ನನಗೆ ಗೊತ್ತಿರಲಿಲ್ಲಾ ನಿಮ್ಮ ಪ್ರಕಾರ ಗಂಡಸುತನ ಹೆಂಡತಿಯರಿಗೆ ಬಳಸುವುದು ಎಂದು!’ ಪ್ರತಿಕ್ರಿಯಿಸಿದ್ದರು.
ಗಂಡಸುತನ ಅಂದಿದ್ದಕ್ಕೆ ಅಸಹ್ಯ ಅನ್ನಿಸಿತೆ ತಮಗೆ?
ನನ್ನಪ್ರಕಾರ ಗಂಡಸ್ಸುತನ ಪದಬಳಕೆ ರಾಜಕೀಯದಲ್ಲಿ ಹೋರಾಟ!
ನನಗೆ ಗೊತ್ತಿರಲಿಲ್ಲಾ ನಿಮ್ಮ ಪ್ರಕಾರ ಗಂಡಸುತನ ಹೆಂಡತಿಯರಿಗೆ ಬಳಸುವುದು ಎಂದು!
ನನ್ನಬಧ್ಧತೆ ಕನ್ನಡನೆಲ ಕನ್ನಡಚಿತ್ರರಂಗ ಕನ್ನಡಿಗರುಮಾತ್ರ ಸಹೋದರ.
ಜೇವನಪೂರ್ತಿ ತಮಿಳುಸೇವೆ ಮಾಡಿ ಇಳಿವಯಸ್ಸಿನಲ್ಲಿ ಕನ್ನಡಕ್ಕಾಗಿ ತಮ್ಮ ಸೇವೆ https://t.co/jbmBqaw3dT— ನವರಸನಾಯಕ ಜಗ್ಗೇಶ್ (@Jaggesh2) February 18, 2018
ಸೈಡ್ ವಿಂಗ್ನ ನಕಲಿ ನಟ, ಕಾಂಗ್ರೆಸ್ ಪಕ್ಷದ ಮುಖವಾಡದ ಒಳಗಿನ ಅನುಯಾಯಿ ಎಂದೆಲ್ಲ ಟೀಕಿಸುವ ಜೊತೆಗೆ ‘ಜೀವನಪೂರ್ತಿ ತಮಿಳುಸೇವೆ ಮಾಡಿ ಇಳಿವಯಸ್ಸಿನಲ್ಲಿ ಕನ್ನಡಕ್ಕಾಗಿ ತಮ್ಮ ಸೇವೆ’ ಎಂದು ಜಗ್ಗೇಶ್ ವ್ಯಂಗ್ಯವಾಡಿದ್ದಾರೆ.
ಈಗ ಪಕ್ಕ ಅರಿವಾಯಿತು ತಾವು ಕಾಂಗ್ರೇಸ ಪಕ್ಷದ ಮುಖವಾಡದ ಒಳಗಿನ ಅನುಯಾಯಿ ಎಂದು! ನನಗೆಜನ ಹೇಳುತ್ತಿದ್ದರು ನಾನು ನಂಬಿರಲಿಲ್ಲಾ!ಈಗಲು ಕೇಳುವೆ ಪ್ರದರ್ಶಿಸಿ ರಾಜಕೀಯ ಪ್ರವೇಶಕ್ಕೆ ಗಂಡುಸ್ಸುತನ..! i mean ಹೋರಾಟ..!ನಾನು ರಂಗದ ಮೇಲೆ ನಟಿಸುವವರ ಇಷ್ಟಪಡವೆ! Side wingನ ನಕಲಿ ನಟರನ್ನ ಅಲ್ಲಾ!ಅದ್ಭುತ ನಟನ ಕವಲುದಾರಿ ನಡೆ ನೋಡಿ ದುಖ್ಖವಾಯಿತು! https://t.co/FPnpe4ejF3
— ನವರಸನಾಯಕ ಜಗ್ಗೇಶ್ (@Jaggesh2) February 18, 2018
ಈ ಎಲ್ಲ ಟ್ವೀಟ್ಗಳ ಚಿತ್ರ ಪ್ರಕಟಿಸಿರುವ ಪ್ರಕಾಶ್ ರಾಜ್, ಚರ್ಚೆ ಏನಿದ್ದರೂ ಭಿನ್ನಾಭಿಪ್ರಾಯಗಳ ಕುರಿತಾಗಿರಬೇಕು. ಕೀಳು ಅಭಿರುಚಿಯ ಮಾತುಗಳು ಖಂಡನೀಯ ಹಾಗೂ ನೀವು ಪೂಜಿಸುವ ರಾಯರೇ ನಿಮ್ಮನ್ನು ನಿರ್ಧರಿಸಲಿ ಎಂದು ದೊಡ್ಡ ನಮಸ್ಕಾರ ಹೇಳಿದ್ದಾರೆ.
@Jaggesh2 ..ರವರೆ....ಭಿನ್ನಾಭಿಪ್ರಾಯಗಳೋಂದಿಗೆ ಚರ್ಚಿಸಬೇಕೆ ಹೋರತು...ನಿಮ್ಮಿಂದ ಇಂತಹ ಕೀಳು ಅಭಿರುಚಿಯ ಮಾತುಗಳು ..ಖಂಡನೀಯ. ಎಲ್ಲರ ಮನಃಸಾಕ್ಶಿ...ಕನ್ನಡದ ಸಭ್ಯ ಸಮಾಜ ..ನೀವು ಪೂಜಿಸುವ ರಾಯರು ತಮ್ಮನ್ನು ನಿರ್ಧರಿಸಲಿ... ನಿಮಗೋಂದು ದೋಡ್ಡ ನಮಸ್ಕಾರ... pic.twitter.com/OkVq2DTg6S
— Prakash Raj (@prakashraaj) February 19, 2018
ಇನ್ನಷ್ಟು: ಗೆದ್ದು ತೊಡೆ ತಟ್ಟಲು ರಾಜಕೀಯ ಕಬಡ್ಡಿ ಆಟವಲ್ಲ; ಜಗ್ಗೇಶ್ಗೆ ಪ್ರಕಾಶ್ ರೈ ತಿರುಗೇಟು